Ad imageAd image

ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಅಮಾನತು

SD Editor
1 Min Read

ಸತ್ಯದರ್ಶಿನಿ ಸುದ್ದಿ
ತುಮಕೂರು: ದೂರು ನೀಡಲು ಬಂದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ರವರನ್ನು ಅಮಾನತ್ತು ಪಡಿಸಲಾಗಿದೆ.
ತುಮಕೂರು ಜಿಲ್ಲಾ ಎಸ್ಪಿ ರವರು ನೀಡಿದ ಪ್ರಕರಣದ ವರದಿ ಮೇರೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ರಾಮಚಂದ್ರಪ್ಪರನ್ನು ಅಮಾನತು ಮಾಡಿ ಈ ಆದೇಶ ಹೊರಡಿಸಿದ್ದಾರೆ.

ದಿನಾಂಕ 05-11-2024 ರಂದು ಸತ್ಯದರ್ಶಿನಿ ದಿನಪತ್ರಿಕೆಯಲ್ಲಿ “ಗೃಹ ಸಚಿವರ ತವರು ಜಿಲ್ಲೆಯಿಂದ ಸ್ತ್ರೀಲೋಲ ಮಧುಗಿರಿ ಪೊಲೀಸ್ ಅಧಿಕಾರಿಯ ಎತ್ತಂಗಡಿ ಯಾವಾಗ?”ಪುಂಡರ ಹಾವಳಿಗೆ ಪೊಲೀಸರಿಂದ ಕಡಿವಾಣ ಸಾಧ್ಯವೇ??” ಎಂಬ ಸುದ್ದಿ ಪ್ರಕಟವಾಗಿತ್ತು. ಅಲ್ಲೀಂದ ಇಲ್ಲಿಯವರೆಗೂ ಹಲವು ದೂರುಗಳು ಸ್ತ್ರೀಲೋಲ ಪೊಲೀಸ್ ಅಧಿಕಾರಿ ಮೇಲೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬರುತ್ತಿದ್ದವು.

ನಿನ್ನೆ ಪಾವಗಡ ತಾಲ್ಲೂಕು ಮಹಿಳೆಯೊಬ್ಬರೊಂದಿಗೆ ಸಮವಸ್ತ್ರದಲ್ಲೇ ಅಸಭ್ಯವಾಗಿ ಡಿವೈಎಸ್ಪಿ ವರ್ತಿಸಿದ ದೃಷ್ಯಗಳು ಹರಿದಾಡಿದ ಹಿನ್ನೆಲೆಯಲ್ಲಿ D.G ಅಲೋಕ್ ಮೋಹನ್  ಕ್ರಮ ಕೈಗೊಂಡಿದ್ದಾರೆ.

- Advertisement -
Ad image

Share this Article