ತುಮಕೂರು : ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಲಾಗಿನ್ ಗೆ ನೌಕರನೊಬ್ಬ ಕನ್ನ ಹಾಕಿ, ಬಾರಿ ಗೋಲ್ಮಾಲ್ ಮಾಡಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.
ಮಧುಗಿರಿ ತಾಲೂಕಿಗೆ ಸಂಬಂಧಿಸಿದ ಭೂ ಪರಿವರ್ತನಾ ಕಡತಕ್ಕೆ ಜಿಲ್ಲಾಧಿಕಾರಿ ಗಮನಕ್ಕೆ ಬಾರದೆ ನೌಕರನೊಬ್ಬ ಅನುಮೋದನೆ ನೀಡಿ ಬಾರಿ ಗೋಲ್ಮಾಲ್ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆಯಾದರೂ ಮತ್ತೆ ಕೆಲವರು ಹೇಳುವ ಪ್ರಕಾರ ಹಿರಿಯ ಅಧಿಕಾರಿಯೊಬ್ಬರು ಜಿಲ್ಲಾಧಿಕಾರಿ ಆಪ್ತ ನೌಕರನಿಗೆ ಸೂಚಿಸಿ ಭೂ ಪರಿವರ್ತನೆ ಕಡತಕ್ಕೆ ಅನುಮೋದನೆ ನೀಡಿಸಿದ್ದಾರೆ ಎನ್ನಲಾಗುತ್ತಿದೆ.

ಜಿಲ್ಲಾಧಿಕಾರಿ ಗಮನಕ್ಕೆ ಬಾರದೆ ಅವರ ಲಾಗಿನ್ಗೆ ಕನ್ನ ಹಾಕಿ ಭೂ ಪರಿವರ್ತನ ಕಡತಕ್ಕೆ ಅನುಮೋದನೆ ನೀಡಲು ಸಾಧ್ಯವೇ….!? ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಓರ್ವ ನೌಕರನನ್ನು ಅಮಾನತ್ತು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ .
ಜಿಲ್ಲಾಧಿಕಾರಿ ಲಾಗಿನ್ಗೆ ಕನ್ನ ಹಾಕಿದ ಸಂಬಂಧಿಸಿದಂತೆ ಹಲವು ಊಹಾಪೋಹಗಳು ಹಬ್ಬುತ್ತಿದ್ದು ಜಿಲ್ಲಾಧಿಕಾರಿ ಈ ಬಗ್ಗೆ ಸ್ವಷ್ಟನೆ ನೀಡುವುದು ಅನಿವಾರ್ಯವಾಗಿದೆ.